ಕೋಲ್‍ರಿಜ್, ಮೇರಿ ಎಲಿಜಬೆತ್
1861-1907. ಕಾದಂಬರಿಗಾರ್ತಿ ಮತ್ತು ಕವಯಿತ್ರಿ. ಸ್ಯಾಮ್ಯುಯಲ್ ಕೋಲ್‍ರಿಜ್ ಟೇಲರನ ಸಹೋದರನ ಮೊಮ್ಮಗಳು. ಹುಟ್ಟಿದ್ದು ಲಂಡನ್ನಿನಲ್ಲಿ. ವಿದ್ಯಾಭ್ಯಾಸ ಮನೆಯಲ್ಲಿಯೇ. ಚಿಕ್ಕ ವಯಸ್ಸಿನಲ್ಲೇ ಪದ್ಯಗಳನ್ನು ಬರೆಯತೊಡಗಿದ್ದಳು. ಮೊದಲ ಪ್ರಕಟಿತ ಗ್ರಂಥ ಫ್ಯಾನ್ಸೀಸ್ ಫಾಲೊಯಿಂಗ್ (1836). ಮೊದಲ ಕಾದಂಬರಿ ದಿ ಸೆವೆನ್ ಸ್ಲೀಪರ್ಸ್ ಆಫ್ ಎಪಿóüೀಸಸ್ (1893). ಈ ಕೃತಿಯನ್ನು ಸ್ಟೀವನ್‍ಸನ್ ಮನಸಾರೆ ಹೊಗಳಿದ್ದಾನೆ. ಈಕೆ ಉತ್ತಮ ಲೇಖಕಿಯೆಂದು ಪ್ರಸಿದ್ಧಿ ಪಡೆದುದು ದಿ ಕಿಂಗ್ ವಿತ್ ಟೂ ಫೇಸಸ್ (1897) ಎಂಬ ಚಾರಿತ್ರಿಕ ರಮ್ಯಕಥೆಯಿಂದ. ದಿ ಫೈರಿ ಡಾನ್ (1901), ದಿ ಷಾಡೊ ಆನ್ ದಿ ವಾಲ್ (1904), ದಿ ಲೇಡಿ ಆನ್ ದಿ ಡ್ರಾಯಿಂಗ್ ರೂಮ್ ¥ósÉ್ಲೂೀರ್ (1906)-ಇವು ಈಕೆಯ ಇತರ ಕಾದಂಬರಿಗಳು. ನಾನ್ ಸೆಕ್ವಿಟರ್ ಎಂಬುದು ಪ್ರಬಂಧ ಸಂಕಲನ. ಪೊಯಮ್ಸ್ ಓಲ್ಡ್ ಅಂಡ್ ನ್ಯೂ ಎಂಬ ಕವನಸಂಕಲನ 1907ರಲ್ಲಿ ಈಕೆಯ ಮರಣಾನಂತರ ಪ್ರಕಟವಾಯಿತು.										(ಎನ್.ಎಸ್.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ